ಹೊಸ ಆವರ್ತ ಕೋಷ್ಟಕದ ಹಾಡು
ಹೈಡ್ರೊಜೆನ್ ಇದೆ, ಹೀಲಿಯಮ್ ಇದೆ
ಮತ್ತೆ ಜೊತೆಗಿವೆ ಲೀತಿಯಮ್, ಬೆರಿಲಿಯಮ್
ಬೋರಾನ್, ಕಾರ್ಬನ್ ಎಲ್ಲೆಲ್ಲೂ ಇದೆ
ಗಾಳಿ ಇರುವೆಲ್ಲೆಡೆ ನೈಟ್ರೋಜನ್ ಇದ್ದೇಇದೆ
ಆಕ್ಸಿಜನ್ ಅಗತ್ಯ ಜೀವಸಂಕುಲ ಉಸಿರಾಡಲು
ಫ್ಲೋರಿನ್ ಬೇಕು ಹಲ್ಲುಗಳು ಥಳಥಳಿಸಲು
ನಿಯಾನ್ ನೀಡುವುದು ಸೂಚಿ ಫಲಕಕ್ಕೆ ಬೆಳಕು
ಸೋಡಿಯಮ್ ಉಪ್ಪಿಲ್ಲದೆ ಸಾಗದು ನಮ್ಮ ಬದುಕು
ಮೆಗ್ನೀಸಿಯಮ್, ಅಲ್ಯೂಮಿನಿಯಮ್, ಸಿಲಿಕಾನ್
ಫಾಸ್ಫರಸ್ ನಂತರ ಸಲ್ಫರ್, ಕ್ಲೋರಿನ್ ಜೊತೆ ಆರ್ಗಾನ್
ನಾವು ಗಟ್ಟಿ ಇವುಗಳ ಜೊತೆ ಸೇರಿದರೆ ಪೊಟಾಸಿಯಮ್, ಕಾಲ್ಷಿಯಮ್
ಸ್ಕಾನಿಡಿಯಮ್, ಟೈಟೀನಿಯಮ್, ವೆನೇಡಿಯಮ್, ಕ್ರೋಮಿಯಮ್, ಮ್ಯಾಂಗನೀಸ್
ಎಲ್ಲವೂ ಕೂಡಿದರೆ ನಮ್ಮ ಜೀವನ ಸಮೃದ್ಧಿ
ಇದೇ ಆವರ್ತ ಕೋಷ್ಟಕ
ಇಲ್ಲಿರುವ ಜಡ ಅನಿಲಗಳು ಬಹುತಟಸ್ಥ
ಗುದ್ದಾಡುತ ಸೆಣಸುವವು ಕ್ಷಾರಗಳ ಜೊತೆ ಹ್ಯಾಲೋಜೆನ್ಗತಳು
ಪ್ರತಿ ಅವರ್ತದಲಿ ಕಾಣುವವು ಪರಮಾಣುವಿನ ಹೊಸ ಹೊರ ಚಿಪ್ಪುಗಳು
ಬಲಕ್ಕೆ ಸರಿದಾಗ ಜೊತೆಗೂಡುವುವು ಮತ್ತಷ್ಟು ಎಲೆಕ್ಟ್ರಾನುಗಳು
ಇಪ್ಪತ್ತಾರನೆಯ ಸ್ಥಾನದಲಿದೆ ಕಬ್ಬಿಣ
ಮುಂದಿವೆ ಕೋಬಾಲ್ಟ್, ನಿಕಲ್-ನಾಣ್ಯಗಳಿಗಿವು ಝಣಝಣ
ತಾಮ್ರ, ಸತು, ಗ್ಯಾಲಿಯಮ್ಗಣಳ
ಜೊತೆಗೂಡುವವು ಜಮೇನಿಯಮ್ ಹಾಗೂ ಆರ್ಸನಿಕ್
ಸೆಲಿನಿಯಮ್ ಮತ್ತು ಬ್ರೋಮಿನ್ ಲೇಪನಕೆ ಸಿದ್ಧ
ಕ್ರಿಪ್ಟಾನ್ ಬೆಳಕು ಕೊಟಡಿ ಬೆಳಗಲು ಪ್ರಸಿದ್ಧ
ರುಬಿಡಿಯಮ್ ಮತ್ತು ಸ್ಟ್ರಾನ್ಷಿಯಮ್ ಆಮೇಲೆ
ಇಟ್ರಿಯಮ್ ಕೈಹಿಡಿದು ಜಿರ್ಕೋನಿಯಮ್
ನೆಯೋಬಿಯಮ್, ಮೊಲಿಬಿನಮ್, ಟೆಕ್ನೀಷಿಯಮ್
ರುತಿನಿಯಮ್, ರೋಡಿಯಮ್, ಪಲೇಡಿಯಮ್
ಬೆಳ್ಳಿ ಫಳಫಳದ ನಂತರ ಕ್ಯಾಡ್ಮಿಯಮ್ ಹಾಗೂ ಇಂಡಿಯಮ್
ತವರ ಬೇಕು ಡಬ್ಬಿಗಳಿಗೆ, ಅ್ಯಂಟಿಮೊನಿಯ ಮುಂದೆ ಟೆಲುರಿಯಮ್,
ಐಯೋಡೈನ್, ಕ್ಸೀನಾನ್, ಸೀಷಿಯಮ್ ಮತ್ತಿತರೆ
ಬೇರಿಯಮ್ ಐವತ್ತಾರರ ನಂತರ ಕೋಷ್ಟಕ ಒಡೆಯುವುದು
ಶುರುವಾಗುವುದು ಹದಿನೇಳು ವಿರಳ ಭಸ್ಮ ಧಾತುಗಳ ಸಾಲು
ಲಾಂತನಮ್, ಸೀರಿಯಮ್ ಮತ್ತು ಪ್ರೇಸೀಯೋಡಿಮಿಯಮ್
ನಿಯೋಡಿಮಿಯಮ್ ಮುಂದೆ ಪ್ರೊಮೀತಿಯಮ್
ಅರವತ್ತೆರಡನೆಯ ಜಾಗದಲಿ ಸಮೇರಿಯಮ್
ಮುಂದೆ ಯೂರೋಪಿಯಮ್, ಗಡೋಲಿನಿಯಮ್ ಹಾಗೂ ಟೆರ್ಬಿಯಮ್
ಡಿಸ್ಪ್ರೋಷಿಯಮ್, ಹೊಲ್ಮಿಯಮ್, ಅ(ಎ)ರ್ಬಿಯಮ್, ತುಲಿಯಮ್
ಯೆಟೆರ್ಬಿಯಮ್, ಲುಟೀಷಿಯಮ್
ಹಾೈಫ್ನಿಯಮ್, ಟ್ಯಾಂಟಲಮ್, ಟಂಗ್ಸ್ಟನ್ ಮುಂದೆ ಹೋದರೆ
ರಿನಿಯಮ್, ಆಸ್ಮಿಯಮ್ ಮತ್ತು ಇರಿಡಿಯಮ್
ಪ್ಲಾಟಿನಮ್, ಚಿನ್ನಗಳು ಇದ್ದರೆ ಸಂಪತ್ತು ಕೊನೆ ತನಕ
ಪಾದರಸಕಿದೆ ತಾಪಮಾನದ ಶೈತ್ಯ ತಿಳಿಸುವ ತವಕ
ಥಾಲಿಯಮ್, ಸೀಸ, ನಿಮ್ಮ ಉದರ ಸ್ವಾಸ್ಥ್ಯಕೆ ಬಿಸ್ಮತ್ತಿನ ಸಹಕಾರ
ಪೊಲೊನಿಯಮ್, ಅಸ್ಟಟೀನ್ ಅಷ್ಟೇನಲ್ಲ ರುಚಿಕರ
ರೇಡಾನ್, ಫ್ರಾನ್ಷಿಯಮ್ ಇರುವಿಕೆಯೇ ಕ್ಷಣಕಾಲ
ಎಂಬತ್ತೊಂಭತ್ತರಲಿ ಆಕ್ಟಿನೈಡ್ಗಷಳು ರೇಡಿಯಮ್ ನಂತರ
ಆಕ್ಟೀನಿಯಮ್, ಥೋರಿಯಮ್, ಪ್ರೋಟಾಕ್ಟೀನಿಯಮ್
ಯುರೇನಿಯಮ್, ನೆಪ್ಚೂನಿಯಮ್, ಪ್ಲುಟೋನಿಯಮ್
ಅಮೇರೀಷಿಯಮ್, ಕ್ಯೂರಿಯಮ್, ಬರ್ಕ್ಲಿಿಯಮ್
ಕ್ಯಾಲಿಫೋರ್ನಿಯಮ್, ಐನ್ಸ್ಟೇನಿಯಮ್, ಫರ್ಮಿಯಮ್
ಮೆಂಡಲೀವಿಯಮ್, ನೊಬೆಲಿಯಮ್, ¯ರೆನ್ಸಿಯಮ್
ರುದರ್ಫೋರ್ಡಿಯಮ್, ಡಬ್ನಿಯಮ್, ಸೀಬೊರ್ಜಿಯಮ್
ಬೋಹ್ರಿಯಮ್, ಹ್ಯಾಸಿಯಮ್ ಮತ್ತು ಮೈಟ್ನೀರಿಯಮ್
ಡಾರ್ಮಸ್ಟೇಡಿಯಮ್, ರಯೋನ್ಜಿನಿಯಮ್, ಕೋಪರ್ನಿಷಿಯಮ್
ಅನನ್ಟ್ರಿ ಯಮ್, ಫ್ಲೇóರೋವಿಯಮ್
ಅನನ್ಪೆನ್ಷಿಯಮ್, ಲಿವರ್ಮೋರಿಯಮ್
ಅನನ್ಸೆಪ್ಷಿಯಮ್, ಅನನಾಕ್ಟಿಯಮ್
ಎಂಥ ಹೆಸರುಗಳಿವು ದೇಶಗಳ ಜೊತೆ ವಿಜ್ಞಾನಿಗಳ ನಮಿಸಲು!
ಓಹ್ ಮುಗಿದಿತ್ತು ಪಟ್ಟಿ ತಾತ್ಕಾಲಿಕವಾಗಿ
ಈಗಷ್ಟೆ ನಿಹೋನಿಯಮ್, ಪ್ಲೆರೋವಿಯಮ್
ಮಾಸ್ಕೋವೀಯಮ್, ಲಿವರ್‍ಮೋರಿಯಮ್
ಟೆನ್ನಿಸೈನ್, ಆಗನೆಸ್ಸನ್ ಸೇರಿವೆ 2018ರಲಿ
ಸ್ವಾಗತಿಸೋಣ ಹೊಚ್ಚ ಹೊಸ ಧಾತುಗಳ ತೆರೆದ ಮನದಿಂದ
ಕಾಯೋಣ ಮುಂದೆ ಮತ್ಯಾವುದೆಂದು ಕಾತುರದಿಂದ
ನಿರ್ಮಲ ಜಿ ವಿ
ಮೊ:98452 93704